ಎಮ್. ಆರ್. ಪಾಟೀಲ್
ಶಾಸಕರು - ಕುಂದಗೋಳ ವಿಧಾನಸಭಾ ಮತಕ್ಷೇತ್ರ 70
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು, ಮಾಜಿ ಜಿಲ್ಲಾ ಅಧ್ಯಕ್ಷರು ಧಾರವಾಡ
ನನ್ನ ಕನಸಿನ ಕುಂದಗೋಳ ಕ್ಷೇತ್ರ
- ಕುಂದಗೋಳ ವಿಧಾನಸಭಾ ಕ್ಷೇತ್ರದ ಜನರ ಜೊತೆ ನಿಕಟ ಸಂಪರ್ಕ ಹಾಗೂ ಬೇರೆ ಅಹವಾಲುಗಳನ್ನು ಆಲಿಸಲು ಕುಂದಗೋಳದಲ್ಲಿ ನನ್ನದೇ ಆದ ಸ್ವಂತ ಕಚೇರಿ ಸ್ಥಾಪಿಸಿ ಸಹಾಯವಾಣಿಯನ್ನು ಆರಂಭಿಸುತ್ತೇನೆ.
- ಕುಂದಗೋಳ ಮತಕ್ಷೇತ್ರದ ಎಲ್ಲ ಗ್ರಾಮಗಳಿಗೆ ಹೆಚ್ಚಿನ ಸಂಖ್ಯೆಯ ಬಸ್ಸಿನ ಸೌಲಭ್ಯ ಒದಗಿಸಿ ವಿದ್ಯಾರ್ಥಿಗಳಿಗೆ ಕಾರ್ಮಿಕರಿಗೆ ಪ್ರಯಾಣಿಕರಿಗೆ ಸಮಯಕ್ಕೆ ಸರಿಯಾಗಿ ಬರುವಂತೆ ನೋಡಿಕೊಳ್ಳುವುದು.
- ಕುಂದಗೋಳ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮ ಪಂಚಾಯತಿಯೊಂದಕ್ಕೆ ಬಡ ಜನರಿಗೆ ಸರ್ಕಾರಿ ಆಸ್ಪತ್ರೆಗೆ ಹೋಗಿ ಬರಲು ಉಚಿತ ವಾಹನ ನೀಡುವುದು.
- ಕುಂದಗೋಳ ವಿಧಾನಸಭಾ ಕ್ಷೇತ್ರದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಸೌಲಭ್ಯ ಒದಗಿಸುವುದು ಹಾಗು ಎಲ್ಲ ಔಷದೋಪಚಾರಗಳು ಲಭ್ಯ ಇರುವಂತೆ ನೋಡಿಕೊಳ್ಳುವುದು.
- ಕುಂದಗೋಳ ವಿಧಾನಸಭಾ ಕ್ಷೇತ್ರದ ಎಲ್ಲ ರೈತರ ಹೊಲಗಳಿಗೆ ಹೋಗುವ ಚಕ್ಕಡಿ ಹಾಗೂ ಒಳ ರಸ್ತೆಗಳನ್ನು ಅಭಿವೃದ್ಧಿಗೊಳಿಸುವುದು.
- ಕುಂದಗೋಳ ವಿಧಾನಸಭಾ ಕ್ಷೇತ್ರದ ರೈತರಿಗೆ ಸಕಾಲದಲ್ಲಿ ಸರ್ಕಾರದಿಂದ ಸಿಗುವ ತೋಟಗಾರಿಕೆ, ಹೈನುಗಾರಿಕೆ, ರೈತ ಸಂಪರ್ಕ ಕೇಂದ್ರದಿಂದ ಪ್ರತಿ ರೈತರ ಹೊಲಗಳ ಮಣ್ಣು ಪರೀಕ್ಷೆ ಹಾಗೂ ಸಬ್ಸಿಡಿ ದರಗಳಲ್ಲಿ ಸಿಗುವ ಆಧುನಿಕ ಕೃಷಿ ಉಪಕರಣಗಳ ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವುದು.
- ಕುಂದಗೋಳ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿ ಒಂದರಂತೆ ಗ್ರಂಥಾಲಯ ಸ್ಥಾಪಿಸುವುದು.
- ಕುಂದಗೋಳ ವಿಧಾನಸಭಾ ಕ್ಷೇತ್ರವನ್ನು ಕರ್ನಾಟಕದಲ್ಲಿ ಹಿಂದುಳಿದ ತಾಲೂಕು ಹಣೆಪಟ್ಟಿ ಅಳಿಸಿ ಮಾದರಿ ತಾಲೂಕನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
- ಕುಂದಗೋಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪ್ರತಿ ಗ್ರಾಮಗಳ ರಸ್ತೆ ಹಾಗೂ ಒಳ ಚರಂಡಿ ನಿರ್ಮಾಣದ ಜೊತೆಗೆ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು.
- ಕುಂದಗೋಳ ವಿಧಾನಸಭಾ ಕ್ಷೇತ್ರದ ಯುವಕರಿಗೆ ಯುವತಿಯರಿಗೆ ಒಳ್ಳೆಯ ಉದ್ಯೋಗ ಕೌಶಲ್ಯ ತರಬೇತಿ ಕೊಡಿಸುವುದು. ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಉತ್ತೇಜಿಸುವುದು ಮತ್ತು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡುವುದು.
- ಕುಂದಗೋಳ ವಿಧಾನಸಭಾ ಕ್ಷೇತ್ರದ ಮನೆ ಇಲ್ಲದ ಬಡವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳನ್ನು ಒದಗಿಸುವುದು.
- ಕುಂದಗೋಳ ವಿಧಾನಸಭಾ ಕ್ಷೇತ್ರದ ಕ್ರೀಡಾ ಉತ್ತೇಜನಕ್ಕೆ ತಾಲೂಕಿಗೆ ಒಂದು ಸುಂದರ ಸ್ವಸಜ್ಜಿತ ಕ್ರೀಡಾಂಗಣ ನಿರ್ಮಿಸುವುದು.
- ಕುಂದಗೋಳ ವಿಧಾನಸಭಾ ಕ್ಷೇತ್ರದ ಎಲ್ಲಾ ದೇವಸ್ಥಾನ ಹಾಗೂ ಮಠಗಳ ಸಮುದಾಯ ಭವನಗಳಿಗೆ ಹೆಚ್ಚಿನ ಅನುದಾನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
- ಕುಂದಗೋಳ ವಿಧಾನಸಭಾ ಕ್ಷೇತ್ರದ ಎಲ್ಲ ಕುಶಲಕರ್ಮಿಗಳಿಗೆ ಸರ್ಕಾರದಿಂದ ಪ್ರತಿ ವರ್ಷ ನಿಗದಿಪಡಿಸಿದ ಸಂಖ್ಯೆಗಳ ಅನುಗುಣವಾಗಿ ಸಲಕರಣೆಗಳನ್ನು ಪೂರೈಸುವುದು.
- ಕುಂದಗೋಳ ವಿಧಾನಸಭಾ ಕ್ಷೇತ್ರದ ಮಹಿಳೆಯರಿಗೆ ಸಶಕ್ತವಾಗಿ ಬೆಳೆದು ಸಂಸಾರಗಳಿಗೆ ಸಹಾಯವಾಗಲು ವಿವಿಧ ಉದ್ಯೋಗದ ಕೌಶಲ್ಯ ತರಬೇತಿಗಳನ್ನು ನೀಡಿ ಪ್ರೋತ್ಸಾಹಿಸುವುದು.
- ಕುಂದಗೋಳ ವಿಧಾನಸಭಾ ಕ್ಷೇತ್ರದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ಡೆಸ್ ಶಾಲೆಯ ಸೌಂದರ್ಯ ಕರಣ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಕಲಿಕೆಗೆ ಬೇಕಾಗುವ ವಾತಾವರಣ ಸೃಷ್ಟಿಸುವುದು
- ಕುಂದಗೋಳ ವಿಧಾನಸಭಾ ಕ್ಷೇತ್ರದ ಅಂಗನವಾಡಿ ಆಶಾ ಕಾರ್ಯಕರ್ತೆಯರ ಹಾಗೂ ಸರ್ಕಾರಿ ನೌಕರರಿಗೆ ಬೇಡಿಕೆಗಳೆನಾದರೂ ಸೂಕ್ತ ರೀತಿಯಲ್ಲಿದ್ದರೆ ಅವರ ಬೆಂಬಲಕ್ಕೆ ಸದಾ ನಿಲ್ಲುವುದು.
- ಕುಂದಗೋಳ ವಿಧಾನಸಭಾ ಕ್ಷೇತ್ರದ ಎಲ್ಲ ನೊಂದಾಯಿತ ಹಾಗೂ ನೊಂದಾಯಿತರಲ್ಲದ ಕಾರ್ಮಿಕರಿಗೆ ಉಚಿತವಾಗಿ ನೊಂದಣಿ ಮಾಡಿಸಿ ಸರಕಾರಿ ಸೌಲಭ್ಯ ಒದಗಿಸುವುದು.
- ಕುಂದಗೋಳ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ನಿರಂತರ ವಿದ್ಯುತ್ ಪೂರೈಕೆಯನ್ನು 24 ತಾಸು ಪೂರೈಕೆ ಆಗುವಂತೆ ನೋಡಿಕೊಳ್ಳುವುದು.
ಪ್ರಣಾಳಿಕೆ
ಬಿಜೆಪಿ ಕರ್ನಾಟಕ ಪ್ರಣಾಳಿಕೆ
ಉಜ್ವಲ ಭವಿಷ್ಯಕ್ಕಾಗಿ
ಕುಂದಗೋಳ ಮತಕ್ಷೇತ್ರದ ಪ್ರಣಾಳಿಕೆ
ಮಾದರಿ ಕ್ಷೇತ್ರಕ್ಕಾಗಿ